ಏನೋ ಒಂಥರಾ 2010 ರ ಕನ್ನಡ ಭಾಷೆಯ ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರವಾಗಿದ್ದು "ಮುಸ್ಸಂಜೆ" ಮಹೇಶ್ ನಿರ್ದೇಶಿಸಿದ್ದು ಉದಯಚಂದ್ರ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಎಂ. ಚಂದ್ರಶೇಖರ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಗಣೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿ.ಹರಿಕೃಷ್ಣ ಅವರು ಧ್ವನಿಮುದ್ರಿಕೆಯನ್ನು ರಚಿಸಿದ್ದಾರೆ. ಈ ಚಿತ್ರವು ಎಸ್ ಜೆ ಸೂರ್ಯ ನಿರ್ದೇಶಿಸಿದ ತಮಿಳಿನ ಕುಶಿ ಚಿತ್ರದ ರಿಮೇಕ್ ಆಗಿದೆ. ಆ ಚಿತ್ರವು ಈಗಾಗಲೇ ತೆಲುಗು ಮತ್ತು ಹಿಂದಿಯಲ್ಲಿ ರಿಮೇಕ್ ಆಗಿತ್ತು. == ಕಥಾವಸ್ತು == ಸೂರ್ಯ (ಗಣೇಶ್) ಮೈಸೂರಿನ ಕಾಲೇಜೊಂದರಲ್ಲಿ ವಿದ್ಯಾರ್ಥಿ. ಅವನು ತನ್ನ ಸಹಪಾಠಿ ಮಧುಮತಿ (ಪ್ರಿಯಾಮಣಿ)ಯ ಆತ್ಮವಿಶ್ವಾಸದ ಸ್ವಭಾವವನ್ನು ನೋಡಿ ಅವಳೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಳ್ಳುತ್ತಾನೆ. ಆದರೆ ಅವರ ಅಹಂ ಕೇಂದ್ರಿತ ಸ್ವಭಾವವು ಅವರನ್ನು ಯಾವಾಗಲೂ ದೂರವಿರುವಂತೆ ಮಾಡುತ್ತದೆ. ಇಬ್ಬರೂ ಒಂದುಸಲ ಪರಸ್ಪರ ಪ್ರೀತಿಸುತ್ತಿರುವ ಅವರ ಸ್ನೇಹಿತರಾದ ಶಾಂತಿ ಮತ್ತು ಪ್ರಸಾದ್ ಅವರನ್ನು ಒಂದುಗೂಡಿಸಲು ಹೆಣಗಾಡುತ್ತಾರೆ. ಅವರ ಸ್ವಂತ ಪ್ರೇಮಕಥೆಗೆ ಏನಾಗುತ್ತದೆ ಎಂಬುದು ಚಿತ್ರದ ಕ್ಲೈಮ್ಯಾಕ್ಸ್ ಆಗಿದೆ. == ಪಾತ್ರವರ್ಗ == ಸೂರ್ಯ ಪಾತ್ರದಲ್ಲಿ ಗಣೇಶ್ ಮಧುಮತಿ ಪಾತ್ರದಲ್ಲಿ ಪ್ರಿಯಾಮಣಿ ಶ್ರೀನಿವಾಸ ಮೂರ್ತಿ ಜೈ ಜಗದೀಶ್ ದಂಡಪಾಣಿ ಡ್ಯಾನ್ಸ್ ಮಾಸ್ಟರ್ ಆಗಿ ಶರಣ್ ತೇಜಸ್ವಿನಿ ಪದ್ಮಾ ವಾಸಂತಿ ವಿಜಯಲಕ್ಷ್ಮಿ ಸಿಂಗ್ ಸತೀಶ್ ನೀನಾಸಂ == ಬಾಕ್ಸ್ ಆಫೀಸ್ == ಏನೋ ಒಂಥರಾ ವಿಮರ್ಶಕರಿಂದ ಮಿಶ್ರ ಮತ್ತು ಋಣಾತ್ಮಕ ವಿಮರ್ಶೆಗಳನ್ನು ಪಡೆಯಿತು, ಅವರು ಚಲನಚಿತ್ರವನ್ನು "ಮೂಲಕ್ಕೆ ತುಂಬಾ ನಿಷ್ಠವಾಗಿದ್ದು ..ಮತ್ತು ಸಮಯ ಮೀರಿದುದು" ಎಂದು ಕರೆದರು, ಮೂಲ ಆವೃತ್ತಿಯು ಹತ್ತು ವರ್ಷಗಳ ಹಿಂದೆ ಬಿಡುಗಡೆಯಾಗಿ ಫ್ಲಾಪ್ ಆಗಿತ್ತು. == ಧ್ವನಿಮುದ್ರಿಕೆ == == ಹೋಮ್ ಮೀಡಿಯಾ == ಚಲನಚಿತ್ರವು ಡಿವಿಡಿಯಲ್ಲಿ 5.1 ಚಾನೆಲ್ ಸರೌಂಡ್ ಸೌಂಡ್ ಮತ್ತು ಇಂಗ್ಲಿಷ್ ಉಪಶೀರ್ಷಿಕೆಗಳು ಮತ್ತು ವಿಸಿಡಿಯೊಂದಿಗೆ ಬಿಡುಗಡೆಯಾಯಿತು. == ಉಲ್ಲೇಖಗಳು == ಏನೋ ಒಂಥರಾ @ ಐ ಎಮ್ ಡಿ ಬಿ